ಅಧ್ಯಾಯ 11

ಮತ್ತಾಯನು ಬರೆದ ಸುಸಂದೇಶಗಳು




1 ಯೇಸುವು ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಹೇಳಬೇಕಾದುದನ್ನು ಹೇಳಿ ಮುಗಿಸಿದ ಬಳಿಕ ಪಟ್ಟಣಗಳಲ್ಲಿ ಬೋಧಿಸುವುದಕ್ಕೂ, ಸುಸಂದೇಶಗಳನ್ನು ಸಾರುವುದಕ್ಕೂ ಅಲ್ಲಿಂದ ಹೊರಟು ಹೋದರು.

ಸ್ನಾನಿಕ ಯೊವಾನ್ನನ ವಿಚಾರಣೆ
(ಲೂಕ7:18-35)

2 ಆಗ ಸೆರೆಮನೆಯಲ್ಲಿದ್ದ ಯೊವಾನ್ನನು ಯೇಸುವಿನ ಕಾರ್ಯಗಳ ಸುದ್ದಿಯನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರ ಮುಖಾಂತರ 3 "ಬರಬೇಕಾದವರು ನೀವೋ ಇಲ್ಲವೆ ನಾವು ಬೇರೊಬ್ಬರಿಗಾಗಿ ಕಾಯಬೇಕೋ", ಎಂದು ಹೇಳಿಕಳುಹಿಸಿದನು. 

4, 5 ಯೇಸು ಅವರಿಗೆ ಪ್ರತ್ಯುತ್ತರವಾಗಿ, "ಕುರುಡರಿಗೆ ಕಣ್ಣುಗಳು ಬರುತ್ತವೆ, ಕುಂಟರಿಗೆ ಕಾಲು ಬರುತ್ತವೆ, ಕುಷ್ಠ ರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿ ಕೇಳಿಸುತ್ತವೆ, ಸತ್ತವರು ಜೀವವನ್ನು ಹೊಂದುತ್ತಾರೆ ಬಡವರಿಗೆ ಸುವಾರ್ತೆ ಸಾರಲಾಗುತ್ತದೆ. ನೀವು ಕಂಡು, ಕೇಳಿದವುಗಳನ್ನು ಹೋಗಿ ಯೊವಾನ್ನನಿಗೆ ತಿಳಿಸಿರಿ. 6 ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು" ಎಂದರು. 

7 ಅವರು ಹೊರಟು ಹೋಗುತ್ತಿರಲು ಯೇಸುವು ಯೊವಾನ್ನನ ಕುರಿತು ಜನಸಮೂಹಗಳೊಂದಿಗೆ, "ಏನನ್ನು ನೋಡಲು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? 8 ನೀವು ಏನನ್ನು ನೊಡುವುದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿದ ಮನುಷ್ಯನನ್ನೋ? ನಯವಾದ ಬಟ್ಟೆಗಳನ್ನು ಧರಿಸಿಕೊಳ್ಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ. 9 ಆದರೆ ನೀವು ಏತಕ್ಕಾಗಿ ಹೋದಿರಿ? ಪ್ರವಾದಿಯನ್ನು ನೋಡಲೋ? ಹಾಗಾದರೆ, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೀವು ನೋಡಿದಿರಿ ಎಂದು ನಾನು ನಿಮಗೆ ಹೇಳುತ್ತೇನೆ. 10 ಏಕೆಂದರೆ, 'ಇಗೋ, ನಿನ್ನ ಮಾರ್ಗವನ್ನು ಸಿದ್ಧಪಡಿಸುವ ನನ್ನ ದೂತನನ್ನು ನಿನಗಿಂತ ಮುಂಚೆಯೇ ಕಳುಹಿಸುತ್ತೇನೆಂದು ಯಾರ ಬಗ್ಗೆ ಬರೆದಿದೆಯೋ ಆ ಪುರುಷನು ಯೋವಾನ್ನನೇ. 11 ಸ್ತ್ರೀಯಲ್ಲಿ ಹುಟ್ಟಿದವರೊಳಗೆ ದೀಕ್ಷಾಸ್ನಾನ ಮಾಡಿಸುವ ಯೊವಾನ್ನನಿಗಿಂತ ದೊಡ್ಡವನು ಹುಟ್ಟಲಿಲ್ಲ; ಆದರೂ ಸ್ವರ್ಗಸಾಮ್ರಾಜ್ಯದಲ್ಲಿರುವ ಅತ್ಯಲ್ಪನೂ ಅವನಿಗಿಂತ ದೊಡ್ಡವನೆನಿಸುತ್ತಾನೆ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 12 ಇದಲ್ಲದೆ ಸ್ನಾನಿಕ ಯೋಹಾನನ ದಿನಗಳಿಂದ ಇದುವರೆಗೂ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿರುತ್ತದೆ; ಮತ್ತು ಬಲಾತ್ಕಾರಿಗಳು ನುಗ್ಗಿ ಅದನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. 13 ಯೋವಾನ್ನನ ಕಾಲದವರೆಗೆ ಎಲ್ಲಾ ಪ್ರವಾದಿಗಳು ಸ್ವರ್ಗಸಾಮ್ರಾಜ್ಯದ ಬಗ್ಗೆ ಪ್ರವಾದನೆ ಮಾಡಿದರು. ಧರ್ಮಶಾಸ್ತ್ರವೂ ಅದನ್ನೇ ಹೇಳಿತು.  14 ನಿಮಗೆ ಇವುಗಳನ್ನು ಅಂಗೀಕರಿಸಲು ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಯೊವಾನ್ನನೇ ಎಂಬುದನ್ನು ತಿಳಿಯಿರಿ. 15 ಕೇಳುವದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ. 16 ಆದರೆ ಈ ನಾಡಿನ ಸಂತತಿಯನ್ನು ನಾನು ಯಾರಿಗೆ ಹೋಲಿಸಲಿ? 17 'ನಾವು ನಿಮಗಾಗಿ ಕೊಳಲನೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಗೀತೆಗಳನ್ನು ಹಾಡಿದೆವು, ಆದರೆ ನೀವು ಕಣ್ಣೀರಡಲಿಲ್ಲ' ಎಂದು ಪೇಟೆ ಬೀದಿಗಳಲ್ಲಿ ಕುಳಿತು ತಮ್ಮ ಸಂಗಡಿಗರನ್ನು ಕರೆಯುತ್ತಾ ಕೂಗಾಡುವ ಮಕ್ಕಳಿಗೆ ಇದು ಹೋಲಿಕೆಯಾಗಿದೆ. 18 ಏಕೆಂದರೆ ಯೋಹಾನನು ಬಂದನು. ಅವನು ತಿನ್ನದೆಯೂ, ಕುಡಿಯದೆಯೂ ಇದ್ದನು. ಅದಕ್ಕೆ, 'ಅವನಿಗೆ ದೆವ್ವ ಹಿಡಿದಿದೆ' ಅಂದರು. 19 ಮನುಷ್ಯಕುಮಾರನು ಬಂದನು. ಅನ್ನಾಹಾರಗಳನ್ನು ಸೇವಿಸಿದನು. 'ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಪಾಪಿಷ್ಟರ ಗೆಳೆಯ' ಎಂದರು. ಆದರೆ ದೈವಜ್ಞಾನವು ನೀತಿಯುಳ್ಳದ್ದೆಂದು ತನ್ನ ಕೆಲಸಗಳಿಂದಲೇ ತಿಳಿಯುತ್ತದೆ" ಎಂದರು.

ಯೇಸು ನಂಬಿಕೆಯಿಲ್ಲದವರಿಗಾಗಿ ದುಖಿಸಿದ್ದು
(ಲೂಕ10:12-15, 21, 22)

20 ತರುವಾಯ ಯೇಸುವು ತಮ್ಮ ಮಹತ್ಕಾರ್ಯಗಳು ಹೆಚ್ಚಾಗಿ ನಡೆಸಿದ ಪಟ್ಟಣಗಳು ದೇವರ ಕಡೆಗೆ ತಿರುಗದೇ ಇರುವುದನ್ನು ಕಂಡು ಅವರು ಅವುಗಳನ್ನು ಗದರಿಸತೊಡಗಿದರು. 21 "ಅಯ್ಯೋ ಖೊರಾಜಿನೇ, ಅಯ್ಯೋ! ಬೆತ್ಸಾಯಿದರೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್‌ ಮತ್ತು ಸೀದೋನ್‌ಗಳಲ್ಲಿ ಪಟ್ಟಣಗಳಲ್ಲಿ ನಡೆದಿದ್ದರೆ ಅವುಗಳು ಈಗಾಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. 22 ಆದರೆ ನ್ಯಾಯತೀರ್ಪಿನ ದಿನ ನಿಮಗಿಂತಲೂ ತೂರ್‌ ಮತ್ತು ಸೀದೋನ್‌ಗಳ ಗತಿಯು ಹೆಚ್ಚು ಮೇಲಾಗಿರುವುದು, ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 23 ಎಲೈ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವೆಯಾ? ಪಾತಾಳಕ್ಕೆ ಇಳಿಯುವೆ; ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಉಳಿಯುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ಮೇಲಾಗಿರುವುದು, ಎಂದು ನಾನು ನಿಮಗೆ ಹೇಳುತ್ತೇನೆ" ಎಂದರು.

25 ಆ ಸಮಯದಲ್ಲಿ ಯೇಸುವು, "ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯರೇ, ನೀವು ಈ ಸಂಗತಿಗಳನ್ನು ಜ್ಞಾನಿಗಳಿಗೂ, ಬುದ್ಧಿವಂತರಿಗೂ ಹೇಳದಂತೆ ಮರೆಮಾಡಿ ಮಕ್ಕಳಿಗೆ ಹೇಳಿರುವುದಕ್ಕಾಗಿ ನಾನು ನಿಮ್ಮನ್ನು ಕೊಂಡಾಡುತ್ತೇನೆ. 26 ಹೌದು, ತಂದೆಯೇ, ಇದು ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು ಎಂದು ನಾನು ನಿಮ್ಮನ್ನು ಕೊಂಡಾಡುತ್ತೇನೆ. 27 ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಇನ್ನಾರೂ ಮಗನನ್ನು ತಿಳಿದವರಿಲ್ಲ; ಇಲ್ಲವೆ ಮಗನ ಹೊರತು ಇನ್ನಾರೂ ತಂದೆಯನ್ನು ತಿಳಿದವನಿಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಆತನೂ ಸಹ ತಂದೆಯನ್ನು ತಿಳಿದವನಾಗುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ